ಎಂಟನೇ ತರಗತಿ ವಿಜ್ಞಾನ ಕಿರುಪರೀಕ್ಷೆ ಪ್ರಶ್ನೆಗಳು
- Get link
- X
- Other Apps
1. ಗಡಿಯಾರದ ಪೆಂಡೂಲಂ ನ ಚಲನೆ ಇದಾಗಿದೆ, a) ರೇಖೀಯ ಚಲನೆ b)ವೃತ್ತೀಯ ಚಲನೆ c)ಆಂದೋಲ ಚಲನೆ 2.ಬೆಳಕಿನ ಚಲನೆ ಇದಾಗಿದೆ a) ರೇಖೀಯ ಚಲನೆ b)ವೃತ್ತೀಯ ಚಲನೆ c)ಆಂದೋಲ ಚಲನೆ 3.ಫ್ಯಾನ್ನ ಚಲನೆಯು ಇದಕ್ಕೆ ಉದಾಹರಣೆಯಾಗಿದೆ a) ರೇಖೀಯ ಚಲನೆ b)ವೃತ್ತೀಯ ಚಲನೆ c)ಆಂದೋಲ ಚಲನೆ 4.ಚಲನೆಯನ್ನು ಇಷ್ಟು ವಿಧಗಳಾಗಿ ವರ್ಗಿಕರಿಸಲಾಗಿದೆ. a) 3 b) 4 c) 5 5.ಒಂದು ಲೋಲಕದ ಆಂದೋಲನ ಅವಧಿಯು a)ಯಾವಾಗಲೂ ಒಂದೇ ಆಗಿರುತ್ತದೆ b)ಬದಲಾಗುತ್ತಿರುತ್ತದೆ c)ಹೆಚ್ಚಾಗುತ್ತಿರುತ್ತದೆ 6.ಒಂದೇ ಜವದಲ್ಲಿ,ಸರಳ ರೇಖೆಯಲ್ಲಿ ಚಲಿಸುವ ಚಲನೆ a)ಏಕರೂಪ ಚಲನೆ b)ರೇಖೀಯ ಚಲನೆ c)ಆಂದೋಲ ಚಲನೆ 7.ಮೊದಲರ್ಧ ಗಂಟೆಯಲ್ಲಿ 20 ಕಿಲೋಮೀಟರ್ ಚಲಿಸಿದ ಕಾರು ನಂತರದ ಅರ್ಧ ಗಂಟೆಯಲ್ಲಿ 40km ಚಲಿಸಿದರೆ ಕಾರಿನ ಸರಾಸರಿ ಜವ a) 60km/h b) 30 km/h c) 30 km 8. A.ಟೈಲ್ಸ್ ಹಾಕಿರುವ ನೆಲ B.ಗೋಣಿಚೀಲ ಹಾಸಿರುವ ನೆಲ C.ಮರಳುಚಲ್ಲಿರುವ ನೆಲ ಈ ಮೇಲ್ಮೈಗಳ ಘರ್ಷಣೆಗೆ ಸಂಬಂಧಿಸಿದಂತೆ ಏರಿಕೆಯ ಸರಿಯಾದ ಕ್ರಮ a) A, C, B b) A, B, C c) C, B, A 9.ಒಂದೇ ಪ್ರಮಾಣದ ಬಲ ಪ್ರಯೋಗಿಸಿದಾಗ,ಇವುಗಳಲ್ಲಿ ಚೆಂಡು ಅತ್ಯಂತ ಹೆಚ್ಚು ದೂರ ಚಲಿಸುವ ಮೇಲ್ಮೈ a)ಟೈಲ್ಸ್ ಹಾಕಿರುವ ನೆಲ b)ಬಟ್ಟೆಯನ್ನು ಹಾಸಿರುವ ನೆಲ c)ಗೋಣಿಚೀಲವನ್ನು ಹಾಸಿರುವ ನೆಲ 10.ಇವುಗಳಲ್ಲಿ ಚೆಂಡು ಕಡಿಮೆ ದೂರ ಚಲಿಸುವ ಮೇಲ್ಮೈ a)ಟೈಲ್ಸ್ ಹಾಕಿರುವ ನೆಲ b)ಬಟ್ಟೆಯನ್ನು ಹಾಸಿರುವ ನೆಲ c)ಗೋಣಿಚೀಲವನ್ನು ಹಾಸಿರುವ ನೆಲ 11.ಒಂದೇ ಇಳಿಜಾರಿನಿಂದ ಒಂದೇ ಚೆಂಡನ್ನು ಬಿಟ್ಟಾಗ ವಿವಿಧ ಮೇಲ್ಮೈಗಳಲ್ಲಿ ಚೆಂಡು ಬೇರೆ ಬೇರೆ ದೂರ ಕ್ರಮಿಸಲು ಕಾರಣವಾದ ಅಂಶ a)ಘರ್ಷಣೆ b)ಚಂಡಿನ ತೂಕ c)ಇಳಿಜಾರು 12.ಹೊಸ ಟೈರು ಹಾಕಿದ ಗಾಡಿಯ ನೆಲದೊಂದಿಗಿನ ಘರ್ಷಣೆ a)ಏರಿಕೆಯಾಗುತ್ತದೆ b)ಇಳಿಕೆಯಾಗುತ್ತದೆ c)ಸ್ಥಿರವಾಗಿರುತ್ತದೆ | 13.ಕ್ಯಾರಂ ಬೋರ್ಡ್ ಗೆ ಪೌಡರ್ ಹಾಕುವುದರಿಂದ ಘರ್ಷಣೆ a)ಏರಿಕೆಯಾಗುತ್ತದೆ b)ಇಳಿಕೆಯಾಗುತ್ತದೆ c)ಸ್ಥಿರವಾಗಿರುತ್ತದೆ 14.ಗುಂಪಿಗೆ ಸೇರದ್ದನ್ನು ಆಯ್ಕೆ ಮಾಡಿ a)ವಾಹನಕ್ಕೆ ಹೊಸ ಟೈಯರ್ ಅಳವಡಿಸುವುದು b)ಗ್ರೀಸ್ ಹಾಕುವುದು c)ಕೀಲುಗಳಿಗೆ ಎಣ್ಣೆ ಹಾಕುವುದು d)ಕ್ಯಾರಂ ಬೋರ್ಡ್ ಗೆ ಪೌಡರ್ ಹಾಕುವುದು 15.ಗಾಡಿಯ ಚಕ್ರ ಚಲಿಸುವುದು a)ಜಾರು ಘರ್ಷಣೆ b)ಉರುಳು ಘರ್ಷಣೆ c)ಸ್ಥಾಯಿ ಘರ್ಷಣೆ 16.ಇಲ್ಲಿ ಘರ್ಷಣೆ ಅನಗತ್ಯವಾಗಿದೆ a)ಕಾರಿಗೆ ಬ್ರೇಕ್ ಹಾಕವಲ್ಲಿ b) ಜಾರುವುದನ್ನು ನಿಲ್ಲಿಸಲು c)ಜಾರು ಬಂಡಿ ಆಡಲು 17.ಬಿಗಿಯಾಗಿರುವ ನಟ್ ಬೋಲ್ಟ್ ಅನ್ನು ಕಳಚುವಾಗ ನಾವು ಘರ್ಷಣೆಯನ್ನು a)ಕಡಿಮೆ ಮಾಡುತ್ತೇವೆ b)ಹೆಚ್ಚು ಮಾಡುತ್ತೇವೆ c)ಸ್ಥಿರವಾಗಿರಿಸುತ್ತೇವೆ. 18.ಶಬ್ದ ಉತ್ಪತ್ತಿಯಾಗುವ ಸಂದರ್ಭ a)ವಸ್ತು ಕುಗ್ಗಿದಾಗ b)ವಸ್ತು ಹಿಗ್ಗಿದಾಗ c)ವಸ್ತು ಕಂಪಿಸಿದಾಗ 19.ಶಬ್ದದ ವೇಗವು ಇದರಲ್ಲಿ ಅಧಿಕವಿರುತ್ತದೆ a)ಘನ b)ದ್ರವ c)ಅನಿಲ 20.ನಮ್ಮ ನಿಮ್ಮ ಮಧ್ಯೆ ಗಾಳಿ ಇಲ್ಲದಿದ್ದ ಪಕ್ಷದಲ್ಲಿ ಮಾತನಾಡುವುದು a)ಕೇಳಿಸುತ್ತದೆ b)ಕೇಳಿಸುವುದಿಲ್ಲ c)ಅಸ್ಪಷ್ಟವಾಗಿ ಕೇಳಿಸುತ್ತದೆ. 21.ಶಬ್ದದ ಸ್ಥಾಯಿ ಯನ್ನು ನಿರ್ಧರಿಸುವ ಅಂಶ a)ಆವೃತ್ತಿ b) ಪಾರ c)ತರಂಗ ದೂರ 23.ಶಬ್ದದ ಆವೃತ್ತಿಯನ್ನು ಹೆಚ್ಚಿಸಿದರೆ ಸ್ಥಾಯಿಯು a)ಹೆಚ್ಚುತ್ತದೆ b)ಕಡಿಮೆಯಾಗುತ್ತದೆ c)ಬದಲಾಗುವುದಿಲ್ಲ. 24.ಶಬ್ದಶಬ್ದ ಮಾಲಿನ್ಯದಿಂದ ಇದು ಉಂಟಾಗುವುದಿಲ್ಲ a) ತಲೆನೋವು b) ಕಿವುಡುತನ c) ಬೆರಿಬೆರಿ 25, ನಾದಸ್ವರ, ಬೀಗಲ್ ಗಳಲ್ಲಿ ಶಬ್ದ ಉತ್ಪಾದಿಸುವ ಕಂಪಿಸುವ ಭಾಗ a) ಚರ್ಮ b) ಲೋಹ c) ಗಾಳಿ |
- Get link
- X
- Other Apps
Comments
Post a Comment