ಏಳನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು. 2018 March ಒಟ್ಟು ಅಂಕಗಳು:60 ಸಮಯ : 2.5 ಗಂಟೆಗಳು
ಗಣಿತ
I. ಕೆಳಗಿನ ಪ್ರಶ್ನೆಗಳಿಗೆ ಕಿರು ಉತ್ತರ ನೀಡಿ 6x1=6
1)ಸರಳಬಡ್ಡಿ ಕಂಡು ಹಿಡಿಯುವ ಸೂತ್ರ ಬರೆಯಿರಿ.
2) ಮೇಘಳ ವಯಸ್ಸಿಗೆ 15 ನ್ನು ಕೂಡಿದಾಗ 37 ಬರುತ್ತದೆ. ಸಮೀಕರಣ ರೂಪದಲ್ಲಿ ಬರೆಯಿರಿ.
3) ಬಿಡಿಸಿ 3(X-7)=24
4) ಸರ್ವಸಮ ಆಕೃತಿಗಳು ಎಂದರೇನು?
5)ಸರ್ವಸಮತೆಯ ಸಂಕೇತ ಬರೆಯಿರಿ.
6) ದಾಳವನ್ನು ಉರುಳಿಸಲಾಗಿದೆ. ಫಲಿತಾಂಶ ಗಣ ಬರೆಯಿರಿ.
II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 7x2 =14
7)ಘಾತಾಂಕ ನಿಯಮಗಳನ್ನು ಬರೆಯಿರಿ
8) 30 ಜನರು ಒಂದು ಕೆಲಸವನ್ನು 12 ದಿನಗಳಲ್ಲಿ ಮಾಡಬಲ್ಲರು ಹಾಗಾದರೆ ಅದೇ ಕೆಲಸವನ್ನು 20 ಜನರು ಮಾಡಲು ಎಷ್ಟು ದಿನಗಳು ಬೇಕಾಗುವುದು ?
9) ಒಬ್ಬಳು ಒಂದು ತೆಂಗಿನಕಾಯಿಯನ್ನು 10 ರೂ.ಗೆ ಕೊಂಡು ರೂ.15ಕ್ಕೆ ಮಾರುತ್ತಾಳೆ. ಶೇಕಡಾ ಲಾಭವನ್ನು ಕಂಡು ಹಿಡಿಯಿರಿ.
10)ಅಳತೆ ಪಟ್ಟಿ ಮತ್ತು ಕೈವಾರದ ಸಹಾಯದಿಂದ 90° ಕೋನವನ್ನು ರಚಿಸಿ.
11) ಚೌಕಾಕಾರದಲ್ಲಿ ಬಾಗಿಸಾದ ತಂತಿಯ ಸುತ್ತಳತೆ 100 cm,ಈ ಚೌಕವು ಆವರಿಸುವ ವಿಸ್ತೀರ್ಣವನ್ನು ಕಂಡು ಹಿಡಿಯಿರಿ
12) ಕೆಳಗಿನವುಗಳನ್ನು ಕಂಡು ಹಿಡಿಯುವ ಸೂತ್ರ ಬರೆಯಿರಿ.a)ವೃತ್ತ ಪರಿಧಿ b)ವೃತ್ತದ ವಿಸ್ತೀರ್ಣ
c)ತ್ರಿಭುಜದ ವಿಸ್ತೀರ್ಣ d)ಸಮಾಂತರ ಚತುರ್ಭುಜದ ವಿಸ್ತೀರ್ಣ
13)2,10,9,9,5,2,3,7,11 ಗಳ ಸರಾಸರಿ, ಮಧ್ಯಾಂಕ,ರೂಢಿಬೆಲೆಗಳನ್ನು ಕಂಡು ಹಿಡಿಯಿರಿ.
ವಿಜ್ಞಾನ
I. ಕೆಳಗಿನ ಪ್ರಶ್ನೆಗಳಿಗೆ ಕಿರು ಉತ್ತರ ನೀಡಿ. 5x1= 5
1. ಮಂಡಲದ ಸಂಕೇತಗಳನ್ನು ಉಪಯೋಗಿಸಿ ಒಂದು ಸರಳ ವಿದ್ಯುತ್ ಮಂಡಲದ ನಕ್ಷೆ ಬರೆಯಿರಿ.
2.ವಿದ್ಯುತ್ ನ ಶಾಖೋತ್ಪನ್ನ ಪರಿಣಾಮದ ಮೇಲೆ ಕೆಲಸ ಮಾಡುವ ಒಂದು ಉಪಕರಣ ತಿಳಿಸಿ
3. ಬೆಳಕಿನ ವಕ್ರೀಭವನ ಎಂದರೇನು?
4.ವಿಶ್ವ ಎಂದರೇನು?
5.ಗೆಲಕ್ಸಿ ಎಂದರೇನು?
II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 6x2=12
6, ರಾಸಾಯನಿಕ ಕ್ರಿಯೆಗಳ ವಿಧಗಳನ್ನು ತಿಳಿಸಿ.
7. ನೆರಳುಂಟಾಗುವಿಕೆಯನ್ನು ವಿವರಿಸಿ.
8.ವಿದ್ಯುತ್ ಪ್ರವಾಹದ ಪರಿಣಾಮಗಳನ್ನು ತಿಳಿಸಿ.
9. ಜಲ ಮಾಲಿನ್ಯದ ಬಗ್ಗೆ ಪುಟ್ಟ ಟಿಪ್ಪಣಿ ಬರೆಯಿರಿ.
10, ಲೈಂಗಿಕ ಸಂತಾನೋತ್ಪತ್ತಿಯ ಹಂತಗಳನ್ನು ತೋರಿಸುವ ನಕ್ಷೆ ಬರೆಯಿರಿ.
11.ನುಗ್ಗೆ ಮತ್ತು ಕುಂಬಳಗಳಲ್ಲಿ ನಡೆಯುತ್ತಿರುವ ಸಂತಾನೋತ್ಪತ್ತಿಯ ವಿಧಗಳನ್ನು ಗುರುತಿಸಿ ಹೋಲಿಸಿ.
III.ಉತ್ತರಿಸಿ 1x3=3
12) NaCl ನಲ್ಲಿ ಅಯಾನಿಕ್ ಬಂಧ ಏರ್ಪಡುವಿಕೆಯ ಚಿತ್ರ ಬರೆಯಿರಿ.
ಸಮಾಜ ವಿಜ್ಞಾನ
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 10 x 2= 20
1) ಬಾಕ್ಸರ್ ಕದನ ಎಷ್ಟರಲ್ಲಿ ಸಂಭವಿಸಿತು? ಇದರ ಪರಿಣಾಮಗಳಾವುವು ?
2) ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?ಇದು ರೈತರ ಮೇಲೆ ಬೀರಿದ ಪರಿಣಾಮಗಳೇನು?
3) ಥಿಯೋಸೌಫಿಕಲ್ ಸೊಸೈಟಿಯ ಮೂಲಸ್ಥಾಪಕರು ಯಾರು?
ಇದರ ಉದಾದೇಶಗಳೇನು?
4) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಎಷ್ಟರಲ್ಲಿ ಮತ್ತು ಯಾರು ಸ್ಥಾಪಿಸಿದರು? ಇದರ ಉದ್ದೇಶಗಳೇನು?
5) ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರು ಯಾರು? ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಲು ನಿಮಗೇಕೆ ಇಚ್ಚೆಯಿದೆ ? ಕಾರಣ ಕೊಡಿ.
6) ಭಾರತದ ಸಂವಿಧಾನ ತಿದ್ದುಪಡಿ ವಿಧಾನಗಳಾವುವು? ಸರಳ ಬಹುಮತ ತಿದ್ದುಪಡಿ ಎಂದರೇನು?
7) ರಾಜ್ಯ ನಿರ್ದೇಶಕ ತತ್ವಗಳು ಎಂದರೇನು? ಸರ್ವರಿಗೂ ಸಮಾನ ಕಾನೂನಿನ ಅವಶ್ಯಕತೆಯನ್ನು ತಿಳಿಸಿ?
8) ಆಸ್ಟ್ರೇಲಿಯನ್ನು ಅತ್ಯಂತ ಸಮತಟ್ಟಾದ ಭೂಖಂಡ ಎನ್ನುವರು ಏಕೆ? ಆಸ್ಟ್ರೇಲಿಯ ಖಂಡದ ಪ್ರಮುಖ ನದಿಗಳನ್ನು ಹೆಸರಿಸಿ.
9)ಅಂಟಾರ್ಟಿಕ ಖಂಡವನ್ನು ಶ್ವೇತಖಂಡ ಎನ್ನುವರು ಏಕೆ? ಅಂಟಾರ್ಟಿಕ ಖಂಡದಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರಗಳಾವುವು?
10) ಭಾರತದ ಅಂದವಾದ ನಕ್ಷೆಯನ್ನು ಬಿಡಿಸಿ ಈ ಕೆಳಕಂಡವುಗಳನ್ನು ಗುರುತಿಸಿ
a)ಉತ್ತರ ಪ್ರದೇಶ b)ಗುಜರಾತ್ c)ಪಶ್ಚಿಮ ಬಂಗಾಳ d)ಪಂಜಾಬ್
Comments
Post a Comment