8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು 2018 March ಒಟ್ಟು ಅಂಕಗಳು:60 ಸಮಯ : 2.5ಗಂಟೆಗಳು
8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ
ಕೋರ್ ವಿಷಯಗಳು
2018 March ಒಟ್ಟು ಅಂಕಗಳು:60 ಸಮಯ : 2.5ಗಂಟೆಗಳು
ಗಣಿತ
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 7x2= 14
1) 12 ಲೇಖನಿಗಳ ಅಸಲು ಬೆಲೆಯು 10 ಲೇಖನಿಗಳ ಮಾರಾಟ ಬೆಲೆಗೆ ಸಮ.ಪ್ರತಿಶತ ಲಾಭವನ್ನು ಕಂಡು ಹಿಡಿಯಿರಿ.
2) 1728 ನ್ನು ಘಾತಾಂಕ ರೂಪದಲ್ಲಿ ಬರೆಯಿರಿ
3)XY=7.8cm,YZ=4.5cm ಮತ್ತು ZX=9.5cm ಇರುವ XYZ ತ್ರಿಭುಜ ರಚಿಸಿ.
4) ಕೋ.ಬಾ.ಕೋ ಸಿದ್ದಾoತವನ್ನು ನಿರೂಪಿಸಿ.
5) ಇವುಗಳನ್ನು ನಿರೂಪಿಸಿ.a)ಕರ್ಣ b) ಪತಂಗ
6)PQRS ಸಮಾಂತರ ಚತುರ್ಭುಜದಲ್ಲಿ ಬಾಹು SR ಅನ್ನು T ವರೆಗೆ ವೃದ್ಧಿಸಿದೆ ಮತ್ತು ∠QRT=105° ಇದೆ.∠P,∠Q,∠R,∠S ಗಳನ್ನು ಕಂಡು ಹಿಡಿಯಿರಿ.
7) ಈ ಕೆಳಕಂಡ ಚಿತ್ರದಲ್ಲಿ x ನ ಬೆಲೆ ಕಂಡು ಹಿಡಿಯಿರಿ
8) ಫಾತಾಂಕಗಳ ಆರು ನಿಯಮಗಳನ್ನು ಬರೆಯಿರಿ. [3 ಅಂಕಗಳು ]
9) ಕೋನಾರ್ಧಕ ಎಂದರೇನು?[1 ಅಂಕ]
10) ಈ ಕೆಳಗಿನ ಪ್ರಾಪ್ತಾoಕಗಳ ರೂಢಿಬೆಲೆ ಕಂಡು ಹಿಡಿಯಿರಿ
5,3,3,5,7,6,3,4,3,5,8,5 [1ಅಂಕ]
11.ಚೌಕಳಿ ಹಾಳೆಯಲ್ಲಿ ನಿರ್ದೇಶಾಂಕ ವ್ಯವಸ್ಥೆಯನ್ನು ರಚಿಸಿ A(-3,5) ,B(0,-4) ಗಳನ್ನು ಗುರುತಿಸಿ. [1ಅಂಕ]
ವಿಜ್ಞಾನ[ಆವರಣದಲ್ಲಿ ಅಂಕಗಳನ್ನು ಸೂಚಿಸಲಾಗಿದೆ]
1. ಕೆಳಗಿನ ಸಂದರ್ಭಗಳಲ್ಲಿ ಭವಿಷ್ಯ ನುಡಿಯಿರಿ.
a) ನೀರಿಗೆ ವಾಷಿಂಗ್ ಸೋಡ ಸೇರಿಸಿದಾಗ [1]
b) ವಸ್ತುಗಳು ಕಂಪಿಸಿದಾಗ [1]
c) ಒಂದು ತರಂಗದ ಆವೃತ್ತಿ ಮತ್ತು ತರಂಗ ದೂರ ಗುಣಿಸಿದಾಗ [1]
d) ಸೋಡಿಯಂ ಲೋಹವು ನೀರಿನೊಂದಿಗೆ ಪ್ರತಿಕ್ರಿಯಿಸಿದಾಗ [2]
e) ಯಾವುದೇ ಸ್ಥಿತಿಯಲ್ಲಿರುವ ವಸ್ತುವನ್ನು ಕಾಯಿಸಿದಾಗ [3]
2.ದ್ರವ್ಯ ವರ್ಗೀಕರಣದ ಪರಿಕಲ್ಪನಾ ನಕ್ಷೆ ಬರೆಯಿರಿ.[3]
3. ಇವುಗಳನ್ನು ನಿರೂಪಿಸಿ; a) ಬೆಳಕಿನ ಪ್ರತಿಫಲನ b) ವಕ್ರೀಭವನ c) ಬೆಳಕಿನ ಚದುರುವಿಕೆ.[3]
4. ಆಹಾರವನ್ನು ವರ್ಗೀಕರಿಸಿ ಅವುಗಳಡಿಯಲ್ಲಿ ಬರುವ ಪೋಷಕಾಂಶಗಳನ್ನು ತಿಳಿಸುವ ನಕ್ಷೆ ಬರೆಯಿರಿ.[3]
5. ಇಡೀ ಜೀವ ಸಂಕುಲದ ಆಹಾರಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮೂಲವಾಗಿರುವ ಜೀವರಾಸಾಯನಿಕ ಕ್ರಿಯೆಯನ್ನು ಹೆಸರಿಸಿ. [1]
6. ಗ್ಲುಕೋಸ್ + ಆಕ್ಸಿಜನ್ - - - -> ಕಾರ್ಬನ್ ಡೈ ಆಕ್ಸೈಡ್+ನೀರು+ ಶಕ್ತಿ (673 Kcal) ಈ ರಾಸಾಯನಿಕ ಕ್ರಿಯೆಯು ಪ್ರತಿಕ್ಷಣ ನಿಮ್ಮಲ್ಲಿ ನಡೆಯುತ್ತಿದೆ. ಇದರ ಹೆಸರೇನು?[1]
7. ಜೇನು ನೊಣಗಳೇನದರೂ ಸಂಪೂರ್ಣವಾಗಿ ನಾಶವಾದರೆ ಭೂಮಿಯ ಮೇಲೆ ಮಾನವರು ಮತ್ತು ಇತರ ಜೀವಿಗಳು ನಾಲ್ಕೈದು ವರ್ಷ ಕೂಡ ಬದುಕುಳಿಯುವುದಿಲ್ಲ ಎಂದು ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಹೇಳಿರುವುದನ್ನು ಸಮರ್ಥಿಸಿ.[1]
ಸಮಾಜ ವಿಜ್ಞಾನ
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 10 x 2= 20
1. ಎರಡನೇ ಚಂದ್ರ ಗುಪ್ತನಿಗಿದ್ದ ಬಿರುದು ಯಾವುದು? ಈತನ ಸಾಧನೆಯನ್ನು ಕುರಿತು ತಿಳಿಸಿ.
2. ಮಾನವ ಹಕ್ಕುಗಳು ಎಂದರೇನು? ಇದರ ಬೆಳವಣಿಗೆ ಕುರಿತು ತಿಳಿಸಿ.
3. ಸ್ಥಳೀಯ ಸರ್ಕಾರ ಎಂದರೇನು? ಗ್ರಾಮ ಪಂಚಾಯಿತಿ ರಚನೆ ಹೇಗೆ ಮಾಡಲಾಗುವುದು ತಿಳಿಸಿ.
4. ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯ ಎಂದರೇನು?
5.ಯೋಜನೆ ಎಂದರೇನು? ಯೋಜನಾ ಆಯೋಗದ ಹೀಗಿನ ಹೆಸರೇನು? ಭಾರತದ ಯೋಜನೆಗಳ ಉದ್ದೇಶಗಳೇನು?
6.ಗೋಳದ ಅಂದವಾದ ಚಿತ್ರ ಬರೆದು ಈ ಕೆಳಕಂಡ ಅಕ್ಷಾಂಶ ರೇಖೆಗಳನ್ನು ಗುರ್ತಿಸಿ.
(A) ಸಮಭಾಜಕವೃತ್ತ ರೇಖೆ 0° (B)ಮಕರಸಂಕ್ರಾಂತಿ ವೃತ್ತ ರೇಖೆ 23.5° (C)ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ 23.5°
7) ವಾಯಗೋಳ ಎಂದರೇನು?ವಾಯುಗೋಳದ ವಿವಿಧ ಮಂಡಲಗಳು ಯಾವುವು?
8) ಸಂಸ್ಕೃತಿ ಎಂದರೇನು? ಇದರ ಗುಣಲಕ್ಷಣಗಳನ್ನು ತಿಳಿಸಿ.
9)ವ್ಯಾಪಾರ ಎಂದರೇನು? ಸಂಚಾರಿ ಅಂಗಡಿಗಳ ವಿಧಗಳು ಯಾವುವು?
10)ಭಾರತದ ಅಂದವಾದ ನಕ್ಷೆಯನ್ನು ರಚಿಸಿ ಈ ಕೆಳಕಂಡ ಪ್ರಾಚೀನ ಪ್ರದೇಶಗಳನ್ನು ಗುರ್ತಿಸಿ
(A) ಪಾಟಲಿಪುತ್ರ (B)ವೆಂಗಿ (C)ಕಂಚಿ (D)ಕಳಿಂಗ
Comments
Post a Comment