6 ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ 2018 March ಕೋರ್ ವಿಷಯಗಳು ಅಂಕಗಳು: 60 ಸಮಯ:2.5 hrs

 6 ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ 2018 March ಕೋರ್ ವಿಷಯಗಳು ಅಂಕಗಳು: 60      ಸಮಯ:2.5 hrs


ಗಣಿತ

I. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ     6x1= 6

1) ಸಂಕಲನ ಮಾಡಿ: 5.4 +3.279+ 6.3+4

2)0 ಯಿಂದ 9 ರ ವರೆಗಿನ ಸಮಮಿತಿ ಅಕ್ಷ ಹೊಂದಿರುವ ಸಂಖ್ಯೆಗಳನ್ನು ಬರೆಯಿರಿ.

3)2/7+3/7= 5/7 ಆಗಿದೆ.ಇಲ್ಲಿ ಛೇಧಗಳನ್ನು ಕೂಡುವುದಿಲ್ಲ ಏಕೆ?

4) 24.532 ಅನ್ನು ಸ್ಥಾನ ಬೆಲೆಗನುಗುಣವಾಗಿ ಬಿಡಿಸಿ ಬರೆಯಿರಿ.

5) 8 ಮತ್ತು 20 ರ ಮ.ಸಾ.ಅ ಕಂಡು ಹಿಡಿಯಿರಿ.

6) ಒಂದು ಆಯತವನ್ನು ರಚಿಸಿ ಸಮಮಿತಿ ಅಕ್ಷಗಳನ್ನು ಎಳೆಯಿರಿ.


II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ    5x2 =10

7) ಸಂಕ್ಷೇಪಿಸಿ 3/4 + 2/9 - 5/7

8) ಒಂದು ಬೀಜೋಕ್ತಿಯನ್ನು ಬರೆದು ಹೇಳಿಕೆ ರೂಪದಲ್ಲಿ ವ್ಯಕ್ತಪಡಿಸಿ.

9) ಆರು ಡಜನ್ ಬಾಳೆ ಹಣ್ಣಿನ ಬೆಲೆ 150 ರೂ.ಗಳಾದರೆ 2 ಡಜನ್ ಬಾಳೆಹಣ್ಣಿನ ಬೆಲೆ ಎಷ್ಟು?[ಸಮಾನುಪಾತ ನಿಯಮ ಬಳಸಿ ಕಂಡು ಹಿಡಿಯಿರಿ]

10) 120° ಕೋನವನ್ನು ಅಳತೆ ಪಟ್ಟಿ ಹಾಗೂ ಕೈವಾರಗಳನ್ನು ಉಪಯೋಗಿಸಿ ರಚಿಸಿ.

11) ಈ ಆಕೃತಿಯ ಸುತ್ತಳತೆ ಮತ್ತು 

      ವಿಸ್ತೀರ್ಣ ಕಂಡು ಹಿಡಿಯಿರಿ




III.12) 10560 ಸಂಖ್ಯೆ ಯಾವ ಯಾವ ಸಂಖ್ಯೆಗಳಿಂದ ಭಾಗವಾಗುತ್ತದೆoಬುದನ್ನು ಭಾಜ್ಯತೆಯ ನಿಯಮ ಉಪಯೋಗಿಸಿ ಪರಿಶೀಲಿಸಿ. [4 ಅಂಕಗಳು]


ವಿಜ್ಞಾನ

I. ಬಿಟ್ಟಿರುವ ಸ್ಥಳ ಭರ್ತಿ ಮಾಡಿರಿ 4 x 1 = 4

a) ಜೋಕಾಲಿಯ ತೊನೆದಾಟದಲ್ಲಿ ಕಂಡು ಬರುವ ಚಲನೆ --------------- ಆಗಿದೆ.

b) ಅಗ್ನಿಶಾಮಕವನ್ನು ಕಂಡು ಹಿಡಿದವರು --------------.

c) ಸೂರ್ಯನ ಅತಿನೇರಳೆ ಕಿರಣಗಳನ್ನು ---------------- ಪದರವು ತಡೆಯುತ್ತದೆ.

d) ಚಂದ್ರ ಗ್ರಹಣ -------------- ದಿನಗಳಂದು ಸಂಭವಿಸುತ್ತದೆ.


II. ಹೊಂದಿಸಿ ಬರೆಯಿರಿ.  4x1 = 4

1) ವಕ್ರ ಚಲನೆ      -----> ಕಪ್ಪೆ

2)ಭ್ರಮಣ ಚಲನೆ -----> ವಕ್ರ ರಸ್ತೆಯಲ್ಲಿ ಚಲಿಸುತ್ತಿರುವ ಕಾರು

3) ರಕ್ತ ಹೀರುಕ     ------> ತಿರುಗುತ್ತಿರುವ ಬುಗುರಿ

4) ಕೀಟಹಾರಿ      --------> ಜಿಗಣೆ


III. ಉದಾಹರಣೆ ಕೊಡಿ   2x1= 2

1)ಕೊಳತಿನಿ -----> --------------

2) ಶವಾಹಾರಿ ---> --------------


IV. ಗುಂಪಿಗೆ ಸೇರದ ಪದ ಬರೆಯಿರಿ  3x1= 3

1)ನೊಳ್ಳೆ , ನೊಣ, ಅಮೀಬ, ಚಿಟ್ಟೆ

2)ಕಾರ್ಬನ್ ಡೈ ಆಕ್ಸೈಡ್, ನೀರು, ಆಕ್ಸಿಜನ್, ಪತ್ರಹರಿತ್ತು

3) ಸಿಂಹ,ಮೊಲ,ಹುಲಿ,ನರಿ


V. ಒಂದು ವಾಕ್ಯದಲ್ಲಿ ಉತ್ತರಿಸಿ 7x1=7

1) ಗಾಳಿಯಲ್ಲಿರುವ ಎರಡನೇ ಪ್ರಮುಖ ಘಟಕ ಯಾವುದು?

2) ಉಪಗ್ರಹ ಎಂದರೇನು?

3) ಚಂದ್ರನ ಎರಡು ಚಲನೆಗಳು ಯಾವುವು?

4) ಬೆಂಕಿ ಉರಿಯಲು ಸಹಾಯ ಮಾಡುವ ಅನಿಲ ಯಾವುದು?

5) ನೀರಿನಲ್ಲಿ ಇರುವ ಧಾತುಗಳು ಯಾವುವು?

6) ಗಡಿಯಾರದಲ್ಲಿರುವ ಲೋಲಕದ ಚಲನೆ ಯಾವ ರೀತಿಯ ಚಲನೆಯಾಗದೆ?

7) ಸೌರವ್ಯೂಹದ ಗ್ರಹಗಳನ್ನು ಕ್ರಮವಾಗಿ ಬರೆಯಿರಿ.


ಸಮಾಜ ವಿಜ್ಞಾನ

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 10x2=20


1.ಶಾಸನಗಳ ಪಿತಾಮಹ ಯಾರು? ಕಳಿಂಗ ಯುದ್ಧದ ಮಹತ್ವ ತಿಳಿಸಿ.


2.ಸಮುದ್ರಗುಪ್ತನಿಗಿದ್ದ ಬಿರುದು ಯಾವುದು? ಆತನ ಸಾಧನೆಗಳ ಬಗ್ಗೆ ವಿವರಿಸಿ


3. ಕನ್ನಡದ ಮೊದಲ ಶಾಸನ ಯಾವುದು? ಇದನ್ನು ಹೊರಡಿಸಿದ ಕದಂಬ ದೊರೆ ಯಾರು?


4. ಪ್ರಭುತ್ವ ಎಂದರೇನು? ಅವುಗಳ ವಿಧಗಳನ್ನು ತಿಳಿಸಿ.


5.ಲೋಕಸಭಾ ಸದಸ್ಯರ ಅರ್ಹತೆಗಳಾವುವು?


6. ಕೇಂದ್ರ ಸರಕಾರ ಎಂದರೇನು? ಕೇಂದ್ರ ಸರಕಾರದ 3 ಮುಖ್ಯ ಅಂಗಗಳಾವುವು?


7. ಯುರೋಪನ್ನು ಏಷ್ಯಾದ ಪರ್ಯಾಯ ದ್ವೀಪ ಎನ್ನುವರು ಏಕೆ?


8. 'ಏಷ್ಯಾ ವೈಪರೀತ್ಯಗಳ ಖಂಡ' ಎನ್ನುವರು ಏಕೆ?


9. ಪ್ರಸ್ಥ ಭೂಮಿ ಎಂದರೇನು? ಪ್ರಪಂಚದ? ಮೇಲ್ಛಾವಣಿ ಎಂದು ಕರೆಯಿಸಿಕೊಂಡ ಪ್ರಸ್ಥ ಭೂಮಿ ಯಾವುದು?


10. ಭಾರತದ ಅಂದವಾದ ನಕ್ಷೆ ಬಿಡಿಸಿ ಕೆಳಕಂಡ ಪ್ರದೇಶಗಳನ್ನು ಗುರ್ತಿಸಿರಿ

A. ಬನವಾಸಿ B.ತಲಕಾಡು C.ಬಾದಾಮಿ D.ಹಳೇಬೀಡು

Comments

Popular posts from this blog

ಎಂಟನೇ ತರಗತಿ ವಿಜ್ಞಾನ ಕಿರುಪರೀಕ್ಷೆ ಪ್ರಶ್ನೆಗಳು

6ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಅವಧಿ: 40 ನಿಮಿಷಗಳು

8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು 2018 March ಒಟ್ಟು ಅಂಕಗಳು:60 ಸಮಯ : 2.5ಗಂಟೆಗಳು