ವಿಜ್ಞಾನ 7 ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನ ಅಂಕಗಳು: 40 ಸಮಯ :90 ನಿಮಿಷಗಳು
I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 12x1=12
1.ನಮಗೆ ಉಸಿರಾಡಲು ಬೇಕಾಗಿರುವ ಅನಿಲ
a) ಆಕ್ಸಿಜನ್ b) ಹೈಡ್ರೊಜನ್ c) ಕಾರ್ಬನ್ d) ಹೀಲಿಯಂ
2.ನಮ್ಮ ದೇಹದಲ್ಲಿ ಇಷ್ಟು ಶ್ವಾಸಕೋಶಗಳಿವೆ
a) 2 b) 1 c) 3 d) 4
3. _______ ದಲ್ಲಿನಮ್ಮ ಶ್ವಾಸಕೋಶಗಳು ಹಿಗ್ಗುತವೇ ಮತ್ತು _________ ದಲ್ಲಿ ಗಾಳಿಯು ಹೊರ ಹೋದಂತೆ ಮೂಲ ಸ್ಥಿತಿಗೆ ಬರುತ್ತದೆ.
a) ಉಚ್ವಾಸ ,ನಿಶ್ವಾಸ b)ನಿಶ್ವಾಸ, ಉಚ್ವಾಸ c) ಉಚ್ವಾಸ , ಉಸಿರಾಟ d) ಉಸಿರಾಟ, ನಿಶ್ವಾಸ
4. ಇವುಗಳಲ್ಲಿ ಶ್ವಾಸಾಂಗವಲ್ಲದ್ದು _________
a) ನಾಸಿಕ ಕುಹರ b) ಶ್ವಾಸನಾಳ c) ಅನ್ನನಾಳ d) ಶ್ವಾಸಕೋಶ
5)ಇವುಗಳಲ್ಲಿ ಯಾವುದು ರಕ್ತದ ಘಟಕವಲ್ಲ
a) ಬಿಳಿರಕ್ತಕಣಗಳು b) ಕೆಂಪು ರಕ್ತಕಣಗಳು c) ನೀಲಿ ರಕ್ತಕಣಗಳು d) ಕಿರು ತಟ್ಟೆಗಳು
6)ಆಕ್ಸಿಜನ್ ಯುಕ್ತ ರಕ್ತವನ್ನು ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುವ ರಕ್ತನಾಳ ________
a) ಅಭಿಧಮನಿ b) ಅಪಧಮನಿ c) ಲೋಮನಾಳ d) ಹೃತ್ಕುಕ್ಷಿ
7)ಇವುಗಳಲ್ಲಿ ಯಾವುದು ಸಸ್ಯದ ಕಾಯಜ ಭಾಗವಲ್ಲ
a)ಕಾಂಡ b)ಬೇರು c)ಎಲೆ d)ಹೂವು
8)ಉದ್ದದ ಎಸ್.ಐ ಏಕಮಾನ
a)ಮೀಟರ್ b)ಕಿಲೋಮಿಟರ್ c) ಅಡಿಗಳು d)ಮೈಲುಗಳು
9)ತಂತಿಯ ಮೂಲಕ ವಿದ್ಯುತ್ ಹರಿದಾಗ ತಂತಿಯು ಬಿಸಿ ಆಗುವುದನ್ನು _______ ಎನ್ನುತ್ತೇವೆ.
a)ಉಷ್ಣೋತ್ಪನ್ನ ಪರಿಣಾಮ b)ರಾಸಾಯನಿಕ ಪರಿಣಾಮ c)ಕಾಂತೀಯ ಪರಿಣಾಮ d)ಯಾಂತ್ರಿಕ ಪರಿಣಾಮ
10)ಇವುಗಳಲ್ಲಿ ಕಾಂತೀಯ ಪದಾರ್ಥ
a)ರಬ್ಬರ್ b)ಬೀಗದ ಕೀಲಿ ಕೈ c)ಕಡ್ಡಿ d)ಕಲ್ಲು
11)ಕೆಳಗಿನವುಗಳಲ್ಲಿ ಇದು ಜೀವ ಜಲ
a) ಹಾಲು b)ಮೊಸರು c) ನೀರು d)ಸೀಮೆಣ್ಣೆ
12.ಇವುಗಳಲ್ಲಿ ಸಿಹಿ ನೀರಿನ ಆಕರ
a)ಹಿಂದು ಮಹಾಸಾಗರ b) ಬರಗಿ ಡ್ಯಾಂ c) ಅರಬಿಸಮುದ್ರ d)ಪೆಸಿಫಿಕ್ ಮಹಾಸಾಗರ
II.ಕೆಳಗಿನವುಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ 10x2 = 20
1.ಜೀವಿಗಳ ಲಕ್ಷಣಗಳನ್ನು ಪಟ್ಟಿ ಮಾಡಿ.
2.ಸ್ತುತಿ 400 ಮೀಟರ್ ಓಟದಲ್ಲಿ ಭಾಗವಹಿಸಿ,ಗೆಲುವು ಸಾಧಿಸಿದ್ದಾಳೆ.ಅವಳು ಮನೆಗೆ ಬಂದಾಗ ಅವಳ ಮುಖದಲ್ಲಿ ಸಂತೋಷವಿದ್ದರೂ ಕಾಲಿನ ಸ್ನಾಯುಗಳಲ್ಲಿ ಸೆಳೆತ ನೋವು ಇರುತ್ತದೆ.ಸ್ನಾಯುಗಳನ್ನು ಮಸಾಜ್ ಮಾಡಿದ ನಂತರ ನೋವು ಕಡಿಮೆಯಾಗುತ್ತದೆ.
a)ಆ ಸಮಯದಲ್ಲಿ ಸ್ನಾಯುಗಳಲ್ಲಿ ಯಾವ ರೀತಿಯ ಉಸಿರಾಟ ಕ್ರಿಯೆ ನಡೆಯುತ್ತದೆ.
b)ಸ್ನಾಯುಗಳಲ್ಲಿ ಉಸಿರಾಟ ಕ್ರಿಯೆ ನಡೆದಾಗ ಉಂಟಾಗುವ ಉತ್ಪನ್ನ ಯಾವುದು?
3.ಕಾಯಜ ಸಂತಾನೋತ್ಪತ್ತಿಯ ವಿಧಾನಗಳಿಂದ ಬೆಳೆಯಬಹುದಾದ ಕೆಲವು ಸಸ್ಯಗಳನ್ನು ಹೆಸರಿಸಿ.
4.ಇವುಗಳನ್ನು ಹೆಸರಿಸಿ a)ಹೂವಿನ ಗಂಡು ಭಾಗ
b)ಹೂವಿನ ಹೆಣ್ಣು ಭಾಗ
5.ಚಲನೆಯ ವಿಧಗಳನ್ನು ಪಟ್ಟಿ ಮಾಡಿ.
6.ಚಲನೆಯ ವಿಧಗಳಿಗೆ ಒಂದೊಂದು ಉದಾಹರಣೆ ನೀಡಿ.
7.ಅಪಾರದರ್ಶಕ ವಸ್ತುಗಳೆಂದರೇನು ? ಎರಡು ಉದಾಹರಣೆ ನೀಡಿ.
8.ನೆರಳು ಏಕೆ ಉಂಟಾಗುತ್ತದೆ?
9)ನಿಮ್ನ ಮತ್ತು ಪೀನ ಮಸೂರ ಗಳಿರುವ ಯಾವುದಾದರೂ ಒಂದು ವ್ಯತ್ಯಾಸ ಬರೆಯಿರಿ.
10.ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಅನುಕೂಲತೆಗಳೇನು?
III.ಕೆಳಗಿನವುಗಳಿಗೆ ಉತ್ತರಿಸಿ 2x4 = 8
1.ಮಾನವನ ಶ್ವಾಸಾಂಗ ವ್ಯೂಹದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.
2.ಒಂದು ಸರಳ ವಿದ್ಯುತ್ ಮಂಡಳದ ಚಿತ್ರ ಬಿಡಿಸಿ,ಭಾಗಗಳನ್ನು (ಸಲಕರಣೆಗಳನ್ನು) ಹೆಸರಿಸಿ.
Comments
Post a Comment