6ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಅವಧಿ: 40 ನಿಮಿಷಗಳು
I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1.ಕುರ್ಚಿಯನ್ನು ಇದರಿಂದ ಮಾಡಿರುತ್ತಾರೆ.
a) ಗಾಜು b) ಚರ್ಮ c) ಪ್ಲಾಸ್ಟಿಕ್
2.ಸಕ್ಕರೆಯೂ ನೀರಿನಲ್ಲಿ ________
a) ಕರಗುತ್ತದೆ b) ಕರಗುವುದಿಲ್ಲ c) ಭಾಗಶಃ ಕರಗುತ್ತದೆ
3.ಮಿಶ್ರಣದಲ್ಲಿರುವ ಕಣಗಳ ಗಾತ್ರಗಳ ವ್ಯತ್ಯಾಸವನ್ನು ಬಳಸಿ ಘಟಕಗಳನ್ನು ಬೇರ್ಪಡಿಸುವ ಕ್ರಿಯೆ.
a)ಜರಡಿ ಹಿಡಿಯುವಿಕೆ b)ಸೋಸುವಿಕೆ c) a ಮತ್ತು b ಎರಡೂ ಸರಿ
4.ಹಾಲು ಮೊಸರಾಗುವುದು;
a)ಪರಾವರ್ತ ಕ್ರಿಯೆ b)ಪರಾವರ್ತ ಕ್ರಿಯೆ ಅಲ್ಲ c) a ಮತ್ತು b ಎರಡೂ ಸರಿ.
5.ಇವುಗಳಲ್ಲಿ ಪರಾವರ್ತಗೊಳಿಸಬಹುದಾದ ಕ್ರಿಯೆ.
a) ಆಹಾರವನ್ನು ಬೇಯಿಸುವುದು b)ಮರದ ತುಂಡನ್ನು ಕತ್ತರಿಸುವುದು c)ಉಪ್ಪನ್ನು ನೀರಿನಲ್ಲಿ ಕರಗಿಸುವುದು
II.ಒಂದು ಜೋಡಿ ಸಂಬಂಧ ಅರಿತು ಇನ್ನೊಂದು ಜೋಡಿ ಪೂರ್ಣಗೊಳಿಸಿ.
1. ಕಲ್ಲು : ಅಪಾರದರ್ಶಕ : : ಗಾಜು : _________
2. ಸಕ್ಕರೆ : ತಿನ್ನಬಹುದಾದ ಪದಾರ್ಥ : : ________________ : ತಿನ್ನಬಾರದ ಪದಾರ್ಥ.
3.ಮಂಜುಗಡ್ಡೆ : ಘನೀಕರಣ : : ಉಪ್ಪು : _________________
4.ಹಿಟ್ಟಿನಿಂದ ಕಲ್ಮಶಗಳು : ಜರಡಿ ಹಿಡಿಯುವಿಕೆ : : ಹಾಲಿನಿಂದ ಕೆನೆ : ______________
5.ಹಾಲು ಮೊಸರಾಗುವುದು : ಪರಾವರ್ತಗೊಳಿಸಲಾಗುವುದಿಲ್ಲ : : ಕಾಯಿ ಹಣ್ಣಾಗುವುದು : ___________
III. 1ನೇ ಪಟ್ಟಿಯಲ್ಲಿರುವ ಮಿಶ್ರಣಗಳನ್ನು 2ನೇ ಪಟ್ಟಿಯಲ್ಲಿರುವ , ಅವುಗಳನ್ನು ಬೇರ್ಪಡಿಸುವ ವಿಧಾನದೊಂದಿಗೆ ಹೊಂದಿಸಿ ಬರೆಯಿರಿ.
1. ಧಾನ್ಯ ಮತ್ತು ಹೊಟ್ಟು --- ಬಸಿಯುವಿಕೆ
2. ಸಮುದ್ರ ನೀರಿನಲ್ಲಿರುವ ಉಪ್ಪು --- ತೂರುವಿಕೆ
3. ನೀರಿನಲ್ಲಿರುವ ಬೇಳೆ --- ಬಡಿಯುವಿಕೆ
4. ಪೈರಿನಿಂದ ಧಾನ್ಯ --- ಆವೀಕರಣ
IV.ಈ ಕೆಳಗಿನ ಬದಲಾವಣೆಗಳನ್ನು ಪರಾವರ್ತಗೊಳಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಿ.
1.ಹಸಿ ಮೊಟ್ಟೆಯಿಂದ ಬೇಯಿಸಿದ ಮೊಟ್ಟೆ .
2.ಒದ್ದೆ ಬಟ್ಟೆಯಿಂದ ಒಣಗಿಸಿದ ಬಟ್ಟೆ.
3.ಧಾನ್ಯದಿಂದ ಹಿಟ್ಟು.
4. ಮೊಗ್ಗಿನಿಂದ ಹೂ .
V. ಸರಿಯೋ ತಪ್ಪೋ ತಿಳಿಸಿ
1.ಸೀಮೆ ಸುಣ್ಣವು ನೀರಿನಲ್ಲಿ ಕರಗುತ್ತದೆ.
2.ಎಣ್ಣೆ ನೀರಿನಲ್ಲಿ ಬೆರೆಯುತ್ತದೆ.
3.ಹಾಲು ಮತ್ತು ನೀರಿನ ಮಿಶ್ರಣವನ್ನು ಸೋಸುವಿಕೆಯಿಂದ ಬೇರ್ಪಡಿಸಬಹುದು.
4.ಐಸ್ ಕ್ಯಾಂಡಿ ಕರಗುವಿಕೆ ಒಂದು ಪರಾವತ್ತಗೊಳಿಸಲಾಗದ ಕ್ರಿಯೆ.
VI.ಕಿರು ಉತ್ತರ ನೀಡಿ
1.ಮರದಿಂದ ತಯಾರಿಸಬಹುದಾದ ವಸ್ತುಗಳಿಗೆ ಒಂದು ಉದಾಹರಣೆ ಕೊಡಿ.
2.ಕುರ್ಚಿಯನ್ನು ಯಾವ ಯಾವ ಪದಾರ್ಥಗಳಿಂದ ಮಾಡಬಹುದು?
3. ಬೇಯಿಸೋ ಮುನ್ನ ಬೇಳೆಯಲ್ಲಿರುವ ಹೊಟ್ಟು ಮತ್ತು ದೂಳಿನ ಕಣಗಳನ್ನು ಹೇಗೆ ಬೇರ್ಪಡಿಸುವಿರಿ?
4. ಒಂದು ಪದಾರ್ಥದಲ್ಲಿ ಬದಲಾವಣೆಯನ್ನು ಹೇಗೆ ತರುವಿರಿ?
VII.ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರದಿಂದ ತುಂಬಿ.
1.ಪಾಲಿಥಿನ್ ಚೀಲವು ಒಂದು _______ ಪಾರದರ್ಶಕ ವಸ್ತು.
2.ಪೈರಿನಿಂದ ಭತ್ತದ ಕಾಳುಗಳನ್ನು ಬೇರ್ಪಡಿಸುವ ವಿಧಾನವನ್ನು ___________ ಎನ್ನುವರು.
3. ಕೆಲವು ಬದಲಾವಣೆಗಳನ್ನು ________________ ಗೊಳಿಸಲು ಸಾಧ್ಯ.
4.ಕೆಲವು ಬದಲಾವಣೆಗಳನ್ನು ______________ ಗೊಳಿಸಲಾಗುವುದಿಲ್ಲ.
Comments
Post a Comment