ಗಣಿತ 7 ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನ 2023 ಅಂಕಗಳು: 40 ಸಮಯ :90 ನಿಮಿಷಗಳು

 I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 12x1=12

1._________= 2.7

     a) 12.3 - 2.4 b) 1.3+1.4 c) 3.0x9.2 d) 8.64 ÷3.0

2. 5³=__________

       a)5 x 5 b) 5 x 5 x 5 c) 3x3x3x3x3 d) 3 x 3 x 3

3.10% ರ ದಶಮಾಂಶ ರೂಪ __________

       a) 0.10 b) 1.0 c) 10.0 d) 0.010

4. 35° ಕೋನದ ಪೂರಕ ಕೋನ

     a) 145° b) 55° c) 45° d) 155°

5. ಇವುಗಳಲ್ಲಿ ಸಮಮಿತಿ ಆಕೃತಿ ಅಲ್ಲದ್ದು

       a) E b) A c) B d) S

6. ಚೌಕಕ್ಕೆ ಎಳೆಯಬಹುದಾದ ಸಮಮಿತಿ ಅಕ್ಷಗಳ ಸಂಖ್ಯೆ

      a) 3 b) 2 c) 4 d) 6

7.ಇವುಗಳಲ್ಲಿ ಪರಿಭ್ರಮಣ ಸಮಮಿತಿ ಇಲ್ಲದ ಆಕೃತಿ

      a) Z b) L c) H d) S



8.ಇವುಗಳಲ್ಲಿ ಯಾವುದು ಸಮೀಕರಣವಲ್ಲ

      a) 2xy+3 b)3m=3 c)Z+2=0 d) a/3=3

9. x/2=7 ರಲ್ಲಿ x ನ ಬೆಲೆ

     a) 9 b) 14 c) 5 d) 7

10.4p - 3 = 13 ಸಮೀಕರಣದ ಪರಿಹಾರ

       a) 4 b) 5 c) 6 d) 7

11.ಬಾಹುವಿನ ಉದ್ದ 15cm ಇರುವ ಚೌಕದ ಸುತ್ತಳತೆ

        a) 60cm b) 30cm c) 45cm d) 50 cm

12. III ರ ಪ್ರಶ್ನೆ ಸಂಖ್ಯೆ 2 ರಲ್ಲಿ ಅತಿ ಕಡಿಮೆ ಫಲಿತಾಂಶ ನೀಡಿದ ಜಿಲ್ಲೆ

       a)ದಾವಣಗೆರೆ b)ಶಿವಮೊಗ್ಗ c)ಮೈಸೂರು d)ತುಮಕೂರು


II.ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 10x2 = 20

1.ಒಂದು ವಾಹನವು 2.6 ಲೀಟರ್ ಪೆಟ್ರೋಲ್ ಬಳಸಿ 46.8 ಕಿಲೋಮೀಟರ್ ದೂರ ಕ್ರಮಿಸುತ್ತದೆ.ಅದು ಒಂದು ಲೀಟರ್ ಪೆಟ್ರೋಲ್ ನಲ್ಲಿ ಎಷ್ಟು ದೂರ ಕ್ರಮಿಸುತ್ತದೆ?

2.ಸಂಕ್ಷೇಪಿಸಿ a)6.543 - 5.23 b) 10.23x2.3

3. a) (5/2)³ ಅನ್ನು ಓದುವ ಕ್ರಮ ಬರೆಯಿರಿ.

      b) (0.45)⁴ ರಲ್ಲಿ ಆದಾರ ಸಂಖ್ಯೆ ಮತ್ತು ಘಾತ ಸೂಚಿಯನ್ನು ಬರೆಯಿರಿ

4. 256 ನ್ನು ಘಾತಾಂಕ ರೂಪದಲ್ಲಿ ಬರೆಯಿರಿ.

5.ಕೆಳಗಿನವುಗಳನ್ನು ಕಂಡುಹಿಡಿಯಿರಿ  

     a) 43°ಯ ಪೂರಕ ಕೋನ

     b) 95° ಯ ಪರಿಪೂರಕ ಕೋನ

6.ಕೆಳಗಿನ ಚಿತ್ರದಲ್ಲಿ x ಮತ್ತು y ನ ಬೆಲೆಗಳನ್ನು ಕಂಡುಹಿಡಿಯಿರಿ.    

7.ಸಮಮಿತಿ ಆಕೃತಿಗಳಾಗಿರುವ ಇಂಗ್ಲಿಷ್ ವರ್ಣಮಾಲೆಯ ಯಾವುದಾದರು ನಾಲ್ಕು ಅಕ್ಷರಗಳನ್ನು ಬರೆದು ಸಮಮಿತಿಯ ಅಕ್ಷಗಳನ್ನು ಎಳೆಯಿರಿ.

8.ಸನ್ನಿವೇಶ ತಿಳಿದು ಸಮೀಕರಣ ಬರೆಯಿರಿ

    a)ನನ್ನಯ ಐದರಷ್ಟು 25

     b)ನನ್ನ ಆರರಷ್ಟರಿಂದ ಆರನ್ನು ತೆಗೆದಾಗ 60 ದೊರೆಯುವುದು.

9.ಸುಪ್ರಿಯಾಳು ತನ್ನ ಮನೆಯ ಸುತ್ತಲೂ ಚೌಕಾಕಾರದಲ್ಲಿ ತಂತಿ ಬೇಲಿಯನ್ನು ಹಾಕಿಸಬೇಕಿದೆ.ಒಂದು ಬಾಹುವಿನ ಉದ್ದ 150 ಮೀಟರ್ ಆದರೆ ಅವಳ ಮನೆಯ ಸುತ್ತ ಎರಡು ಸುತ್ತು ತಂತಿ ಬೇಲಿ ಹಾಕಲು ಬೇಕಾಗುವ ತಂತಿಯ ಉದ್ದ ಎಷ್ಟು ?

10. 30 ಮೀಟರ್ ಪಾದ ಹಾಗೂ 12 ಮೀಟರ್ ಎತ್ತರವನ್ನು ಹೊಂದಿರುವ ಸಮಾಂತರ ಚತುರ್ಭುಜದ ವಿಸ್ತೀರ್ಣ ಕಂಡುಹಿಡಿಯಿರಿ.

 III.ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 2 x 4 = 8

 1. a)y ನ 15% ವು 60 ಆದರೆ y ನ ಬೆಲೆ ಕಂಡುಹಿಡಿಯಿರಿ.

      b)ಅಸಲು 5000ಗಳನ್ನು 12 ಪರ್ಸೆಂಟ್ ಬಡ್ಡಿದರದಂತೆ ಎರಡು ವರ್ಷಗಳ ನಂತರ ಪಾವತಿಸಬೇಕಾದ ಸರಳ ಬಡ್ಡಿಯನ್ನು ಲೆಕ್ಕಚಾರ ಮಾಡಿ.

2.  2020ರಲ್ಲಿ ಕರ್ನಾಟಕದ ಐದು ಜಿಲ್ಲೆಗಳ ಎಸೆಸೆಲ್ಸಿ ಶೇಕಡ ಫಲಿತಾಂಶ ನೀಡಲಾಗಿದೆ ಸ್ತಂಭ ನಕ್ಷೆ ರಚಿಸಿ.

ಜಿಲ್ಲೆ

ದಾವಣಗೆರೆ

ಶಿವಮೊಗ್ಗ

ಮೈಸೂರು

ಚಿತ್ರದುರ್ಗ

ತುಮಕೂರು

ಶೇಕಡ ಫಲಿತಾಂಶ

78

73

77

76

78


  




Comments

Popular posts from this blog

ಎಂಟನೇ ತರಗತಿ ವಿಜ್ಞಾನ ಕಿರುಪರೀಕ್ಷೆ ಪ್ರಶ್ನೆಗಳು

6ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಅವಧಿ: 40 ನಿಮಿಷಗಳು

8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು 2018 March ಒಟ್ಟು ಅಂಕಗಳು:60 ಸಮಯ : 2.5ಗಂಟೆಗಳು