ವಿಜ್ಞಾನ 6 ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನ ಅಂಕಗಳು: 40 ಸಮಯ :90 ನಿಮಿಷಗಳು
I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 12 x 1 = 12
1.ಗಾಳಿಯಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ
a) CO₂ b) O c) H d) N
2. ಇವುಗಳಲ್ಲಿ ಅಕಾಂತೀಯ ವಸ್ತು
a)ರಬ್ಬರ್ b)ಬೀಗದ ಕೀಲಿ ಕೈ c)ಕಬ್ಬಿಣದ ಮೊಳೆ d)ನಿಕ್ಕಲ್
3.ರೈಲು ಇದಕ್ಕೆ ಉದಾಹರಣೆಯಾಗಿದೆ.
a) ಭೂ ಸಾರಿಗೆ b) ಜಲಸಾರಿಗೆ c) ವಾಯು ಸಾರಿಗೆ
4.ಒಂಟೆಯ ಆವಾಸ _____
a)ಮರುಭೂಮಿ b)ಕೆರೆಗಳು c)ಹುಲ್ಲುಗಾವಲು d)ಪರ್ವತಗಳು
5.ದೂರದ ಅಂತರಾಷ್ಟ್ರೀಯ ಏಕಮಾನ
a)ಮೀಟರ್ b)ಕಿಲೋಮೀಟರ್ c)ಅಡಿ d)ಮೈಲು
6.ಇವುಗಳಲ್ಲಿ ಯಾವುದು ಆಂದೋಲ ಚಲನೆ.
a)ವಿದ್ಯುತ್ ಫ್ಯಾನಿನ ಚಲನೆ b)ಉಯ್ಯಾಲೆ ಚಲನೆ c)ಸೈಕಲ್ ಚಕ್ರದ ಚಲನೆ d)ನೇರವಾಗಿ ಚಲಿಸುತ್ತಿರುವ ಚೆಂಡು
7.ಇವುಗಳಲ್ಲಿ ಸ್ವಯಂಪ್ರಕಾಶ ಉಳ್ಳ ವಸ್ತು
a)ವಿದ್ಯುತ್ ಬಲ್ಬು b)ಚಂದ್ರ c)ಮೇಣದಬತ್ತಿ d)ಮಿಂಚು ಹುಳು
8.ಇವುಗಳಲ್ಲಿ ಯಾವುದು ವಿದ್ಯುತ್ ಉಪಕರಣವಲ್ಲ
a) ಫ್ಯಾನ್ b)ಬಲ್ಬು c)ದೂರದರ್ಶನ d)ಸೌರ ಒಲೆ
9.ಇವುಗಳಲ್ಲಿ ವಿದ್ಯುತ್ ವಾಹಕ
a)ರಬ್ಬರ್ b)ಕಾಗದ c)ಒಣಮರ d)ಬೀಗದ ಕೀಲಿ ಕೈ
10.ವಿದ್ಯುತ್ ಕೋಶದಲ್ಲಿ ಇಷ್ಟು ಅಗ್ರಗಳಿವೆ
a) 1 b) 2 c) 3 d) 4
11.ವಿಶ್ವ ಜಲ ದಿನ
a)ಮಾರ್ಚ್ 21 b)ಮಾರ್ಚ್ 22 c)ಏಪ್ರಿಲ್ 21 d)ಏಪ್ರಿಲ್ 22
12 ಇವುಗಳಲ್ಲಿ ಹಸಿ ಕಸ
a)ಪ್ಲಾಸ್ಟಿಕ್ b)ತರಕಾರಿ ಸಿಪ್ಪೆ c)ಲೋಹದ ತುಂಡುಗಳು d)ಗಾಯಕ್ಕೆ ಕಟ್ಟಿದ ಪಟ್ಟಿ.
II.ಕೆಳಗಿನವುಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ 10x2 = 20
1.ಕಪ್ಪೆಯನ್ನು ಉಭಯವಾಸಿ ಎನ್ನಲು ಕಾರಣವೇನು ?
2.ಆವಾಸದ ವಿಧಗಳನ್ನು ತಿಳಿಸುವ ಪ್ರವಾಹನಕ್ಷೆಯನ್ನು ಬರೆಯಿರಿ.
3.ಚಲನೆಯ ಮೂರು ವಿಧಗಳನ್ನು ಪಟ್ಟಿ ಮಾಡಿ.ಒಂದೊಂದಕ್ಕೂ ಒಂದೊಂದು ಉದಾಹರಣೆ ಕೊಡಿ.
4.ಬೆಳಕಿನ ಮೂಲಗಳನ್ನು ಎರಡು ವಿಧಗಳಾಗಿ ವಿಂಗಡಿಸಿ.ಒಂದೊಂದುಕ್ಕು ಒಂದೊಂದು ಉದಾಹರಣೆ ನೀಡಿ.
5,ದೈನಂದಿನ ಜೀವನದಲ್ಲಿ ಸಿಗುವ ಪಾರದರ್ಶಕ ,ಅಪಾರದರ್ಶಕ, ಮಿತಪಾರದರ್ಶಕ ವಸ್ತುಗಳಿಗೆ ತಲಾ ಎರಡೆರಡು ಉದಾಹರಣೆಗಳನ್ನು ನೀಡಿ.
6.ವಿದ್ಯುತ್ ಸ್ವಿಚ್ ನ ಕೆಲಸವೇನು?
7.ನೀರಿನ ಯಾವುದಾದರೂ ಎರಡು ಉಪಯೋಗ ತಿಳಿಸಿ.
8.ಕೆರೆಯ ಉಪಯೋಗಗಳನ್ನು ಪಟ್ಟಿ ಮಾಡಿ.
9.ಈ ಕೆಳಗಿನ ಕಸಗಳನ್ನು ಕೊಳೆಯುವ ಕಸ ಮತ್ತು ಕೊಳೆಯದ ಕಸಗಳಾಗಿ ವಿಂಗಡಿಸಿ;
[ಎಲೆ,ಪ್ಲಾಸ್ಟಿಕ್,ತರಕಾರಿ ಸಿಪ್ಪೆ,ಗಾಜಿನ ಚೂರು,ಪ್ರಾಣಿಗಳ ತ್ಯಾಜ್ಯ,ಲೋಹ,ಮಾಸ್ಕ್,ಬಳಕೆಗೆ ಬಾರದ ಪೆನ್ ,ಖಾಲಿ ನೀರಿನ ಬಾಟಲಿ ]
10.ದಿನನಿತ್ಯದ ಜೀವನದಲ್ಲಿ ಕಸವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಬರೆಯಿರಿ.
III.ಕೆಳಗಿನವುಗಳಿಗೆ ಉತ್ತರಿಸಿ 2 x 4 = 8
1 .ವಿವಿಧ ಕೃತಕ ಕಾಂತಗಳ ಮಾದರಿ ಚಿತ್ರಗಳನ್ನು ಬರೆಯಿರಿ.
2.ಗಾಳಿಯ ಘಟಕಗಳನ್ನು ಸೂಚಿಸುವ ಪೈನಕ್ಷೆ ರಚಿಸಿ.
Comments
Post a Comment